ಪುತ್ತೂರು, ಆ. 21: ಶ್ರಾವಣ ಮಾಸದ ಶುಕ್ರವಾರ ಹಾಗೂ ಪವಿತ್ರ ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳು 3ನೇ ಶುಕ್ರವಾರ ನಡೆಯುವ ಲಲಿತಾ ಸಹಸ್ರನಾಮ ಪಠಣದೊಂದಿಗೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ವಿಶೇಷ ರೀತಿಯಲ್ಲಿ ನಡೆಯಿತು.
ಸುಮಾರು 80 ಮಂದಿ ಮಾತೆಯರು, ಸಹೋದರಿಯರು ಹಾಗೂ ಕನ್ಯೆಯರು ಭಾಗವಹಿಸಿದರು.
ದೇವಿಗೆ ಬಾಗಿನ ಸಮರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಬಾಗಿನ ವಿತರಿಸಿ, ಲಘು ಉಪಹಾರ ನೀಡಲಾಯಿತು.
ದೇವಸ್ಥಾನದ ಅರ್ಚಕರಾದ ಉದಯ ಭಟ್ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಹಾಗೂ ಶ್ರೀ ಮತಿ ಪ್ರಭಾವತಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.





























