ಬೆಂಗಳೂರು: ನಕಲಿ ಕೀ ಅಲ್ಲ, ಬದಲಿಗೆ ಕೇವಲ ಸೇಫ್ಟಿ ಪಿನ್ ಬಳಸಿ ಬೈಕ್ ಕದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಿಶೋರ್, ಪ್ರವೀಣ್ ಎಂಬಿಬ್ಬರು ಕಳ್ಳರನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಾವು ನಕಲಿ ಕೀ ಬಳಸಿ ಬೈಕ್ ಕದ್ದಿರೋದನ್ನು ನೋಡಿದ್ದೇವೆ. ಆದರೇ ಈ ಖತರ್ನಾಕ್ ಕಳ್ಳರು ಸೇಫ್ಟಿ ಪಿನ್ನಿಂದಲೇ ಬೈಕ್ ಕದಿಯುತ್ತಿದ್ದರು. ಇದುವರೆಗೂ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 18ಕ್ಕೂ ಹೆಚ್ಚು ಬೈಕ್ಗಳು ಕದ್ದಿದ್ದಾರೆ ಎನ್ನಲಾಗಿದೆ.
ಹ್ಯಾಂಡ್ ಲಾಕ್ ಮುರಿದು ಕ್ಷಣ ಮಾತ್ರದಲ್ಲೇ ಸೇಫ್ಟಿ ಪಿನ್ನಿಂದ ಬೈಕ್ ಕದಿಯುತ್ತಾರೆ ಈ ಕಿಡಿಗೇಡಿಗಳು. ಯಾರು ಹೇಳಿಕೊಟ್ಟಿದ್ದು ಎಂದರೆ ಸುಬ್ರಮಣಿ ಎಂಬ ಸಹ ಖೈದಿ ಎಂಬ ಹೆಸರು ಬಾಯಿಬಿಟ್ಟಿದ್ದಾರೆ.
ಕಿಶೋರ್ ಈಗಾಗಲೇ ನಾಲ್ಕೈದು ಬಾರಿ ಕಳ್ಳತನ ಕೇಸ್ನಲ್ಲಿ ಜೈಲು ಸೇರಿದ್ದ. ಈಗ ಕೆ.ಜಿ ಹಳ್ಳಿ ಪೊಲೀಸರು ಈ ಕಳ್ಳರಿಂದ ಸುಮಾರು 15 ಲಕ್ಷ ಮೌಲ್ಯದ 18 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.