ಮಂಗಳೂರು: ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸನ್ನು ವಶಕ್ಕೆ ಪಡೆದಿದ್ದಾರೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಈ ಅಂಬರ್ ಗ್ರೀಸ್ ಅಂದರೆ ತಿಮಿಂಗಿಲದ ವಾಂತಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಭಾಗಮಂಡಲ ನಿವಾಸಿ ಜಾಬಿರ್ ಎಂ.ಎ. ಮತ್ತು ಶಬಾದ್ ಎಲ್.ಕೆ. ಹಾಗೂ ಕಾಂಞಂಗಾಡಿನ ಅಸೀರ್ ಮತ್ತು ಶರೀಫ್ ಎನ್.ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 2.20 ಕೋ.ರೂ. ಮೌಲ್ಯದ ಅಂಬರ್ ಗ್ರೀಸ್, 5 ಮೊಬೈಲ್, 1 ಸ್ವಿಫ್ಟ್ ಕಾರು ಮತ್ತು 1,070 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,25,92,070 ರೂ. ಎಂದು ಅಂದಾಜಿಸಲಾಗಿದೆ.