ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಅಬೂಬಕರ್ ಸಚಿಪ ಎಂಬವರ ಪುತ್ರ ಖಲಂದರ್ ಆಸಿಫ್ (30) ಫೆ.15ರಿಂದ ನಾಪತ್ತೆಯಾಗಿದ್ದಾರೆ.
ಈ ಕುರಿತು ಫೆ.16ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸಿಫ್ ಗಾಳಿಮುಖ ಜವುಳಿ ಅ೦ಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಫೆ.15 ರಂದು ಮನೆಯಿಂದ ಹೋದವರು ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವುದಾಗಿ ಅವರ ಸಹೋದರ ನೌಶಾದ್ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.