ಪುತ್ತೂರು: ಬಾಯಿ ಚಪ್ಪರಿಸಿ ಸವಿಯುವಂತಹ ಸ್ವಾದಿಷ್ಟಕರ ಆಹಾರಗಳ ರೆಸ್ಟೋರೆಂಟ್ “FOOD ZONE” ನೂತನವಾಗಿ ಪುತ್ತೂರಿನ ನೆಲ್ಲಿಕಟ್ಟೆಯ ಈಶ ಕಾಂಪ್ಲೆಕ್ಸ್ ಫೆ.21 ರಂದು ಶುಭಾರಂಭಗೊಳ್ಳಲಿದೆ.
ನೂತನ ಶಾಖೆಯನ್ನು ಪುತ್ತೂರು ಶಾಸಕರಾದಂತಹ ಸಂಜೀವ ಮಠಂದೂರು ರವರು ಉದ್ಘಾಟನೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳಾದ ಇಡ್ಯಡ್ಕ ಬಾರೆಂಗಳ ಗುತ್ತು ಮೋಹನ್ ಗೌಡ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ಪುತ್ತೂರು ಠಾಣಾ ಉಪನಿರೀಕ್ಷಕರಾದ ರಾಜೇಶ್ ಜೆ.ವಿ., ಕಶೆಕೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಂಜೀವ ನಾಯಕ್ ಕಲ್ಲೇಗ, ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕರಾದ ರಾಧಾಕೃಷ್ಣ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕರಾದ ಗಿರಿಶಂಕರ್ ಸುಲಾಯ, ಬ್ಯಾಂಕ್ ಆಫ್ ಬರೋಡ ಪುತ್ತೂರು ಶಾಖೆಯ ಮ್ಯಾನೇಜರ್ ನಿಖಿಲ್ ಕುಮಾರ್ ಆಗಮಿಸಲಿದ್ದಾರೆ.
ಶುಚಿ-ರುಚಿಯಾದ ಬಾಯಿ ಚಪ್ಪರಿಸಿ ಸವಿಯುವಂತಹ ವಿವಿಧ ಬಗೆಯ ಖಾದ್ಯಗಳು ಮಿತ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಶಿವಕಿರಣ್ ರೈ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.