ಮಂಗಳೂರು: ನಗರದ ಕಾರ್ ಸ್ಟ್ರೀಟ್, ಮಣ್ಣಗುಡ್ದೆ ಹಾಗೂ ಸುತ್ತ ಮುತ್ತ ಪರಿಸರದಲ್ಲಿ ಗುರುವಾರ ತಡ ರಾತ್ರಿ ವೇಳೆ ಗ್ಯಾಸ್ ನಂತಹ ಘಾಟು ವಾಸನೆ ಅನುಭವಕ್ಕೆ ಬಂದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಈ ವಾಸನೆ ಎಲ್ಲಿಂದ ಬರುತ್ತಿದೆ ಎನ್ನುವ ಕುರಿತಂತೆ ತಡ ರಾತ್ರಿ ವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಕೂಡ ಇದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸರು, MRPL, HPCL, ಟೋಟಲ್ ಗ್ಯಾಸ್, MCF, ಸಿಟಿ ಏರಿಯಾದಲ್ಲಿರುವ ಆಟೋ ಗ್ಯಾಸ್ ಪಂಪ್‌ಗಳು, ಹೈವೇ ಬದಿ ನಿಂತ ಗ್ಯಾಸ್ ಟ್ಯಾಂಕರ್‌ಗಳಲ್ಲಿ ವಾಸನೆಯನ್ನು ಪರಿಶೀಲಿಸಿದ್ದು ಸೋರಿಕೆ ಕಂಡುಬಂದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.