ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಕಾವು ಸಮೀಪದ ಮಡ್ಯಂಗಲ ಕೌಡಿಚ್ಚಾರು ಎಂಬಲ್ಲಿ ಕಾರುಗಳೆರಡರ ಮಧ್ಯೆ ಅಪಘಾತ ಸಂಭವಿಸಿ, ಓರ್ವ ಸ್ಥಳದಲ್ಲೇ ಮೃತ ಪಟ್ಟು ಮತ್ತಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಫೆ.20 ರಂದು ನಡೆದಿದೆ.
i20 ಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ನಡೆದಿದ್ದು, ಅಪಘಾತದಿಂದಾಗಿ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಅಪಘಾತದಲ್ಲಿ ಮೃತ ಪಟ್ಟ ಚಾಲಕನನ್ನು ಮಡಿಕೇರಿ ಮೂಲದ ರಾಜು ಎಂದು ಗುರುತಿಸಲಾಗಿದೆ.
ಸ್ವಿಫ್ಟ್ ಕಾರಿನ ಚಾಲಕನನ್ನು ಕೈಕಂಬ ಮೂಲದ ಮೊಯಿದ್ದಿನ್ ಕುಂಝೀ ಎಂದು ಗುರುತಿಸಲಾಗಿದೆ.
ಬಜ್ಪೆ ಮೂಲದ ಕುಟುಂಬ ತಲಕಾವೇರಿ ತೆರಳಿದ್ದು, ತಲಕಾವೇರಿಯಿಂದ ಮರಳಿ ಬಜ್ಪೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಬಜ್ಪೆ ಮೂಲದ ಜ್ಯೋತಿ ಎಂಬವರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದ ದೀಪ ಕೂಡ ಜ್ಯೋತಿ ಜೊತೆ ಮಂಗಳೂರಿಗೆ ತೆರಳಿದ್ದಾರೆ. ನೇತ್ರಾವತಿ, ಬೇಬಿ ಪೂಜಾರಿ, ಚೇತನ್ ಎಂಬವರಿಗೆ ಅಲ್ಪ-ಸ್ವಲ್ಪಗಾಯವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.