ಪುತ್ತೂರು: ರಹ್ಮಾನಿಯಾ ಜುಮ್ಮಾ ಮಸೀದಿ ಹಾಗೂ ವಲಿಯುಲ್ಲಾಹಿ ದರ್ಗಾ ಶರೀಫ್ ಬಹು ಪಾಣಕ್ಕಾಡ್ ಪಿ.ಎಂ.ಎಸ್.ಎ. ಪೊಕೊಯಾ ತಂಗಲ್ ನಗರ ಮುಕ್ವೆ ನರಿಮೊಗರಿನಲ್ಲಿ “ಮುಕ್ವೆ ಮಖಾಂ ಉರೂಸ್” ಹಾಗೂ “ಧಾರ್ಮಿಕ ಪ್ರವಚನ” ಕಾರ್ಯಕ್ರಮ ಫೆ.22 ರಿಂದ 27 ರ ವರೆಗೆ ನಡೆಯಲಿದೆ.
ಫೆ.22 ರಂದು ಧ್ವಜಾರೋಹಣದ ಮೂಲಕ ಬಹು ಎಂ. ಎಸ್. ತಂಗಲ್ ಓಲೆಮುಂಡೋವು ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯನ್ನು ಬಹು. ಅಹ್ಮದ್ ಪೊಕೋಯ ತಂಗಲ್ ಪುತ್ತೂರು ರವರು ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಅಸ್ಸಯ್ಯದ್ ಹಬೀಬುರ್ರಹ್ಮಾನ್ ತಂಗಲ್ ಅಲ್ ಬುಖಾರಿ ಆಗಮಿಸಲಿದ್ದಾರೆ.
ಫೆ.23 ರಂದು ಮುಖ್ಯ ಪ್ರಭಾಷಣಕಾರರಾಗಿ ಮಹಮ್ಮದ್ ಸ್ವಾಲಿಹಿ ಹುದವಿ ತೂತ ಮಲಪ್ಪುರಂ, ಕೇರಳ ರವರು ಆಗಮಿಸಲಿದ್ದಾರೆ. ಫೆ.24 ರಂದು ಹನೀಫ್ ನಿಝಮಿ ಮೊಗ್ರಾಲ್, ಫೆ.25 ರಂದು ಸಿ. ಕೆ. ರಾಶಿದ್ ಬುಖಾರಿ, ಇರಿಂಗನ್ನೂರ್ ರವರು ಆಗಮಿಸಲಿದ್ದಾರೆ.
ಫೆ.26 ರಂದು ಉರೂಸ್ ಸಮಾರಂಭದಲ್ಲಿ ದುವಾ ನೇತೃತ್ವವನ್ನು ಸಯ್ಯಿದ್ ಅಬ್ದುಲ್ ರಶೀದ್ ಅಲೀ ಶಿಹಾಬ್ ತಂಗಲ್ ಪಾಣಕ್ಕಾಡ್ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಹುಸೈನ್ ದಾರಿಮಿ ರೆಂಜಲಾಡಿ ಮಾಡಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಅಬೂಬಕ್ಕರ್ ಹುದವಿ ಮುಂಡಂಪರಂಬು ರವರು ಆಗಮಿಸಲಿದ್ದಾರೆ.
ಫೆ.27 ರ ಸಮಾರೋಪ ಸಮಾರಂಭದಲ್ಲಿ ಎನ್. ಪಿ. ಎಂ. ಝನುಲ್ ಆಬಿದೀನ್ ತಂಗಲ್ ದುಗ್ಗಲಡ್ಕ ದುವಾ ನೆರವೇರಿಸಲಿದ್ದಾರೆ. ಬಿ. ಕೆ. ಅಬ್ದುಲ್ ಖಾದರ್ ಆಲ್ ಖಾಸಿಮಿ ಬಂಬ್ರಾಣ, ಮುಪ್ತಿ ರಫೀಕ್ ಅಹ್ಮದ್ ಕೋಲಾರಿ ಹುದವಿ ಖಾದ್ರಿ ಆಗಮಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣಕಾರರಾಗಿ ಎಸ್.ಕೆ. ಎಸ್.ಎಸ್. ಎಫ್. ಕರ್ನಾಟಕದ ಅಧ್ಯಕ್ಷರಾದ ಅನೀಸ್ ಕೌಸರಿ ರವರು ಆಗಮಿಸಲಿದ್ದಾರೆ ಎಂದು ಮುಕ್ವೆ ಉರೂಸ್ ಸಮಿತಿ ಪ್ರಕಟಣೆ ತಿಳಿಸಿದೆ.