ಬೆಂಗಳೂರು: ಡಿಕೆಶಿ ಅವರ ಪ್ರಚೋದನಕಾರಿ ಹೇಳಿಕೆಯಿಂದ ಪ್ರೇರಿತರಾದ ಮುಸಲ್ಮಾನ ಗೂಂಡಾಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಹತ್ಯೆಗೀಡಾದ ವ್ಯಕ್ತಿ ಬಹಳ ಪ್ರಾಮಾಣಿಕ, ತುಂಬಾ ಒಳ್ಳೆಯ ಯುವಕ. ಇನ್ನೂ ಮದುವೆಯನ್ನೂ ಆಗಿರಲಿಲ್ಲ. ಅಂತವನ ಹತ್ಯೆ ಆಗಿದೆ. ಮುಸಲ್ಮಾನ ಗೂಂಡಾಗಳಿಗೆ ಇಷ್ಟು ಧೈರ್ಯಎಲ್ಲಿಂದ ಬಂದಿದೆ ಎಂದು ಸರ್ಕಾರ ತನಿಖೆ ಮಾಡ್ತಿದೆ.
ಶಿವಮೊಗ್ಗದಲ್ಲಿ ಈ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.


























