ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವವು ಮಾ.15 ಮತ್ತು 16 ರಂದು ನಡೆಯಲಿದ್ದು, ಪೂರ್ವಬಾವಿಯಾಗಿ ಇಂದು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಅಣ್ಣಿ ಪೂಜಾರಿ ಹಿಂದಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಗೌಡ ಕಡ್ಯ, ಅಶೋಕ್ ಕುಮಾರ್ ಪುತ್ತಿಲ, ಕೋಶಾಧಿಕಾರಿಗಳಾದ ಜನಾರ್ಧನ ಜೋಯಿಸ, ಶ್ರೀ ರಂಗ ಶಾಸ್ತ್ರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾರಾಯಣ್ ನಾಯ್ಕ್, ವೇದಾವತಿ, ಕೃಷ್ಣ ಪ್ರಸಾದ್ ಶರ್ಮ, ಕೇಪು ನರಿಮೊಗರು, ಮೋಹನ ನಾಯ್ಕ್, ಅರ್ಚಕರಾದ ರಮೇಶ್ ಬೈಪಾಡಿತ್ತಾಯ, ಶಿವ ಪ್ರಸಾದ್ ಹೆಬ್ಬಾರ್ ಮತ್ತು ಉತ್ಸವ ಸಮಿತಿಯ ವಸಂತ ರೈ ನರಿಮೊಗರು, ಬಾಬು ಪುತ್ತಿಲ,ದೇವಸ್ಥಾನದ ನೌಕರರಾದ ಕೇಶವ ನಾಯ್ಕ್, ಪ್ರೇಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು.