ಕಡಬ: ರಾತ್ರಿ ಮನೆಯವರೆಲ್ಲ ಮಲಗಿದ್ದ ವೇಳೆ ಮನೆಗೆ ನುಗ್ಗಿ ಕಳ್ಳರು ನಗ-ನಗದು, ಬ್ಯಾಂಕ್ ಎಟಿಎಂ ಕಾರ್ಡ್ ಅನ್ನು ಕಳವು ಮಾಡಿರುವ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಮನೆಯವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ ರವರ ಪತ್ನಿ ಶಶಿಕಲಾ ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.21 ರಂದು ರಾತ್ರಿ ಮನೆಯವರೆಲ್ಲ ಊಟ ಮುಗಿಸಿ ಮಲಗಿದ್ದ ವೇಳೆ ಹಿಂಬದಿ ಬಾಗಿಲು ಮುರಿದು ಮನೆಯೊಳಗೇ ಪ್ರವೇಶಿಸಿದ ಕಳ್ಳರು ಗೋದ್ರೆಜ್ ಕಪಾಟನ್ನು ತೆರೆದು ಸೀರೆ ಬಟ್ಟೆ ಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು. ಸೀರೆಗಳ ನಡುವೆ ಇಟ್ಟಿದ ನಗದು 35.000 ರೂ. ಹಾಗೂ ಸೆಲ್ಪ್ ನಲ್ಲಿ ಇರಿಸಿದ್ದ ನಗದು ರೂ 30.000 ಸಾವಿರ ಮತ್ತು ಯುಕೋ ಬ್ಯಾಂಕಿನ ATM ಕಾರ್ಡ್ ಹಾಗೂ ಒಂದು ಬೆಳ್ಳಿಯ ಚೈನ್ ಇದರ ಅಂದಾಜು ಬೆಲೆ 1000 ರೂ ಕಳ್ಳತನವಾಗಿದ್ದು, ಅಂದಾಜು ಬೆಲೆ ನಗದು ರೂ ಒಟ್ಟು 65.000 ಮೊತ್ತ ಮತ್ತು ಬೆಳ್ಳಿಯ ಚೈನ್ 1000/-ರೂ ಮೊತ್ತ ಕಳವು ಮಾಡಿಕೊಂಡಿದ್ದು, ಕಳುವಾದ ಒಟ್ಟು ಮೌಲ್ಯ 66.000 ರೂ ಆಗಿದ್ದು, ಕಳವುಗೈದ ಆರೋಪಿಗಳನ್ನು ಪತ್ತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ ಕ್ರ ನಂಬ್ರ: 15/2022 ಕಲಂ 457.380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.