ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಜಾಯಿಕಾಯಿಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದರಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ರಕ್ತದಲ್ಲಿನ ಸಕ್ಕರೆ, ಅಧಿಕರ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಜಾಯಿಕಾಯಿಯು ತುಂಬಾ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಗುಣಗಳು ಇವೆ.
ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ: ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು. ಹಲ್ಲುನೋವು ನಿವಾರಕವಾಗಿ ಜಾಯಿಕಾಯಿ. ವಾಕರಿಕೆ ಸಮಸ್ಯೆ ನಿವಾರಿಸುತ್ತೆ ಜಾಯಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸೋದ್ರಿಂದ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತೆ.. ನರಮಂಡಲದ ಆರೋಗ್ಯ ಜಾಯಿಕಾಯಿ ಎಣ್ಣೆಯನ್ನು ಜೀರ್ಣಕ್ರಿಯೆ ಸಮಸ್ಯೆಗೆ ಹೆಚ್ಚಾಗಿ ಬಳಸಲಾಗುತ್ತೆ. ಆದ್ರೆ ಇದು ನರವ್ಯೂಹ ಸರಿಯಾಗಿ ಕಾರ್ಯ ನಿರ್ವಗಿಸುವಂತೆಯೂ ನೋಡಿಕೊಳ್ಳುತ್ತೆ. ಹಾಗಾಗಿ ದೇಹದ ಡಯಟ್ ಸಿಸ್ಟಮ್ ಸರಿಯಾಗಿರುವಂತೆಯೂ ನೋಡಿಕೊಳ್ಳುತ್ತೆ. ಗ್ಯಾಸ್ಟಿಕ್ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುವ ಗುಣ ಲಕ್ಷಣಗಳು ಜಾಯಿಕಾಯಿಯಲ್ಲಿ ಕಂಡು ಬರುತ್ತವೆ.