ಕಡಬ: ರಾಮಕುಂಜ ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಶಾಲಾ ಪಕ್ಕದ ಖಾಸಗಿ ವ್ಯಕ್ತ್ತಿಯೋರ್ವರ ರಬ್ಬರ್ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಬ್ಬರ್ ಗಿಡಗಳಿಗೆ ಹಾನಿಯಾಗಿದೆ. ರಬ್ಬರ್ ತೋಟದ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ನಲ್ಲಿರುವ ಚೇಂಜ್ ಓವರ್ ಸ್ವಿಚ್ ಬಳಿ ಬೆಂಕಿ ಕಾಣಿಸಿಕೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ.
ಕೊಯಿಲ ಗ್ರಾ.ಪಂ ಸದಸ್ಯ ಚಿದಾನಂದ ಪಾನ್ಯಾಲು ನೇತೃತ್ವದಲ್ಲಿ ಸ್ಥಳೀಯರ ತಂಡ ಬೆಂಕಿ ನಂದಿಸಲು ಪ್ರಯತ್ನಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಬಳಿಕ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.