ವಿಟ್ಲ: ವ್ಯಕ್ತಿಯೋರ್ವರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ, ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ ನಡೆದಿದ್ದು, ತಂದೆಯೇ ಮಗನನ್ನು ಹತ್ಯೆ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಕಾಂತಾಮೂಲೆ ನಿವಾಸಿ ದಿನೇಶ್ ಅಲಿಯಾಸ್ ಚಿರತೆ ದಿನೇಶ್ (45) ಎಂದು ಗುರುತಿಸಲಾಗಿದೆ.
ದಿನೇಶ್ ರವರ ಮೃತದೇಹವು ಅವರ ಮನೆಯ ರೂಮ್ ನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದಿನೇಶ್ ಮತ್ತು ಆತನ ತಂದೆ ವಸಂತ ಗೌಡ ಇಬ್ಬರೇ ಮನೆಯಲ್ಲಿ ವಾಸವಿದ್ದು, ಆತನ ತಂದೆಯೇ ಕೊಲೆಗೈದಿರಬಹುದೆಂಬ ಸಂಶಯ ವ್ಯಕ್ತವಾಗಿತ್ತು.
ಕುಡಿದು ಗಲಾಟೆ ಮಾಡಿ ಬಳಿಕ ತಂದೆಯೇ ಮಗನ ತಲೆಗೆ ಒಡೆದ ಪರಿಣಾಮ ರಕ್ತಸ್ರಾವವಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆಯಲ್ಲಿ ತಂದೆ ಮಗ ಇಬ್ಬರೇ ವಾಸಮಾಡಿಕೊಂಡಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು.
ಇಬ್ಬರಿಗೂ ಕುಡಿತದ ಚಟ ಇದ್ದು, ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ಕೊಲೆಯಾಗಿದೆ ಎನ್ನಲಾಗಿದೆ.
ಬೆಳಿಗ್ಗೆಯಿಂದ ದಿನೇಶ್ ಮನೆಯಿಂದ ಹೊರಗೆ ಯಾಕೆ ಬಂದಿಲ್ಲ ಎಂದು ಸಂಶಯ ಗೊಂಡ ಸ್ಥಳೀಯರು ಹುಡುಕಿದಾಗ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ವಸಂತ ಗೌಡ ನನ್ನು ಬಂಧಿಸಿದ್ದಾರೆ. ಫೆ.23ರಂದು ರಾತ್ರಿ ನಮ್ಮಿಬ್ಬರ ಮಧ್ಯೆ ಕಲಹ ನಡೆದಿರುವುದಾಗಿ ಆರೋಪಿ ವಸಂತ ಗೌಡ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.