ಪುತ್ತೂರು: ತಾಲೂಕಿನ ಪಡ್ನೂರು ಗ್ರಾಮದ ರೆಂಜಾಳ ನಿವಾಸಿ ಹರಿಶ್ಚಂದ್ರ ಆಚಾರ್ಯ ರವರ ಮನೆಯು ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು, ಮನೆಯ ಒಳಗಡೆ ಪೂರ್ತಿ ನೀರು ತುಂಬಿ ವಾಸಿಸಲು ಆಗದೆ ಮನೆಯ ಹೊರಗಡೆ ಶೀಟ್ ಹಾಕಿ ಅಡುಗೆ ಮತ್ತು ಮಲಗುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸರ್ಕಾರದ ವತಿಯಿಂದ ಯಾವುದೇ ಪರಿಹಾರ ಸಿಗದೆ ಇದ್ದ ಕಾರಣ, ಬಡ ಕುಟುಂಬದವರು ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಯವರ ಕಛೇರಿಗೆ ಬಂದು ಭೇಟಿ ಮಾಡಿದ್ದು, ಭೇಟಿ ಮಾಡಿದ ಕೂಡಲೇ ಅಶೋಕ್ ಕುಮಾರ್ ರವರೇ ಖುದ್ದು ಭೇಟಿ ಕೊಟ್ಟು ಮನೆಯನ್ನು ಪುನಃ ನಿರ್ಮಾಣ ಕೊಡುವುದಾಗಿ ಭರವಸೆ ನೀಡಿದ್ದರು.
ಭರವಸೆಯನ್ನು ನೀಡಿದಂತೆ ಮನೆಯನ್ನು ದುರಸ್ತಿ ಮಾಡಿ ಫೆ.26 ರಂದು ಹಸ್ತಾಂತರ ಮಾಡಲಾಯಿತು.
ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಲಾದ 99 ನೇ ಮನೆ ಇದಾಗಿದ್ದು, ರೈ ಎಸ್ಟೇಟ್ ಮಾಲಕರಾದ ಅಶೋಕ್ ರೈ ರವರೇ ದೀಪ ಪ್ರಜ್ವಲನೆ ಮಾಡುವ ಮೂಲಕ ಮನೆಯನ್ನು ಹರಿಶ್ಚಂದ್ರ ಆಚಾರ್ಯ ಕುಟುಂಬದವರಿಗೇ ಹಸ್ತಾಂತರಿಸಿದರು.
ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು ಸಂಕಷ್ಟದಲ್ಲಿರುವ ಜನರ ಪಾಲಿಗೆ ಆಶಾದಾಯಕವಾಗಿದ್ದಾರೆ.