ವಿಟ್ಲ: ಸಾಮಾಜಿಕ ತಾಣದಲ್ಲಿ ಸಂಸದರ ಬಗ್ಗೆ ಪೋಸ್ಟ್ ಮಾಡಿದನೆಂಬ ಕಾರಣಕ್ಕಾಗಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನನ್ನು ಸ್ವ ಪಕ್ಷದ ವಿಟ್ಲದ ನಾಯಕನೊಬ್ಬನ ಮಾತಿನಂತೆ ಬೆಳ್ಳಂಬೆಳಗ್ಗೆ ವಿಟ್ಲ ಪೊಲೀಸರು ಠಾಣೆಗೆ ಕರೆದೊಯ್ಯಿದಿದ್ದು, ತದನಂತರದ ಬೆಳವಣಿಗೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ವಶದಲ್ಲಿದ್ದ ಯುವಕನನ್ನು ಬಿಡಿಸಿಕೊಂಡು ಹೋದ ಘಟನೆ ವಿಟ್ಲದಲ್ಲಿ ನಡೆದಿದ್ದು, ಈ ಘಟನೆಯಿಂದಾಗಿ ಮನನೊಂದ ಯುವಕ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಪೋಸ್ಟ್ ಗಳನ್ನು ಹಾಕಿ ಬೇಸರ ವ್ಯಕ್ತ ಪಡಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..
‘ಬಿಜೆಪಿ ಕಾರ್ಯಕರ್ತನಾಗಿದ್ದೆ ನನಗೆ ಮುಳುವಾಯಿತು’, ಎಂದೆಲ್ಲಾ ಬರೆದುಕೊಂಡು ಯುವಕ ಬೇಸರ ವ್ಯಕ್ತ ಪಡಿಸಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ.
ವಾಟ್ಸಪ್ ಗ್ರೂಪ್ ಒಂದರಲ್ಲಿ ಯುವಕ ಸಂಸದರ ಬಗ್ಗೆ ಪೋಸ್ಟ್ ಮಾಡಿದ್ದ ಹಾಗೂ ತುಸು ಸಮಯದ ಬಳಿಕ ಗ್ರೂಪ್ ನಿಂದ ಹೊರ ಹೋಗಿದ್ದ.
ಸ್ವ ಪಕ್ಷದ ವಿಟ್ಲದ ನಾಯಕನೊಬ್ಬನ ಮಾತಿನಂತೆ ಪೊಲೀಸರು ಯುವಕನ್ನು ಠಾಣೆಗೆ ಕರೆದೊಯ್ಯಿದಿದ್ದು,
ಈತನನ್ನು ಪೋಲಿಸ್ ಠಾಣೆಗೆ ಕರೆ ತಂದ ವಿಷಯ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ವಶದಲ್ಲಿದ್ದ ವ್ಯಕ್ತಿ ಮಾಡಿದ ಪೋಸ್ಟ್ ನಲ್ಲಿ ಯಾವುದೇ ಕೆಟ್ಟ ಹಾಗೂ ಅವಮಾನ ಮಾಡುವಂತಹ ಯಾವುದೇ ವಿಷಯ ಇಲ್ಲ ಎಂಬುದನ್ನು ತಿಳಿಸಿ ಆತನನ್ನು ಬಿಡುಗಡೆಗೊಳಿಸಿಕೊಂಡು ಹೋಗಿದ್ದರು.
ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಪೋಸ್ಟ್ ಮಾಡಿದ ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು. ಈಗ ಯುವಕ ಹಾಕಿದ ಬೇಸರದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಂದಿನ ಬೆಳವಣಿಗೆ ಯಾವ ರೀತಿಯಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ..



























