ಬಹುನಿರೀಕ್ಷೆಯ ದೇಶದ ಚಿತ್ರ ಪ್ರೇಮಿಗಳೆಲ್ಲಾ ಎದುರು ನೋಡುತ್ತಿರುವ ಕೆಜಿಎಫ್-2 ಚಿತ್ರದ ಟ್ರೇಲರ್ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್-2’ ಚಿತ್ರದ ಟ್ರೇಲರ್ ಇದೇ ಮಾರ್ಚ್ 27ರಂದು ಬಿಡುಗಡೆಯಾಗಲಿದೆ.
ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಣೆ ಮಾಡಿಕೊಂಡಿದೆ. “ಬಿರುಗಾಳಿಗಿಂತ ಮೊದಲು ಯಾವಾಗಲೂ ಗುಡುಗು ಬರುತ್ತದೆ. ಕೆಜಿಎಫ್ 2 ಚಿತ್ರದ ಟ್ರೇಲರ್ ಮಾರ್ಚ್ 27ರ ಸಂಜೆ 6.40ಕ್ಕೆ ಬಿಡುಗಡೆಯಾಗಲಿದೆ” ಎಂದು ಮಾಹಿತಿ ನೀಡಿದೆ.
ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಭಾಗ ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದು, ಹೀಗಾಗಿ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
There is always a thunder before the storm ⚡#KGFChapter2 Trailer on March 27th at 6:40 pm.
— Hombale Films (@hombalefilms) March 3, 2022
Stay Tuned: https://t.co/QxtFZcv8dy@Thenameisyash @prashanth_neel@VKiragandur @hombalefilms @HombaleGroup @duttsanjay @TandonRaveena @SrinidhiShetty7
#KGF2TrailerOnMar27 pic.twitter.com/4TBuGaaUKh