ಪುತ್ತೂರು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಂಬಿಕಾ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿ ಆದಿತ್ಯ ಮುಂಬೈಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗದ ಜಗದೀಶ್ ಎಂಬವರ ಪುತ್ರ ಆದಿತ್ಯ(19) ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದುತ್ತಿದ್ದು, ಅಂಬಿಕಾ ವಸತಿ ನಿಲಯದಲ್ಲಿ ವಾಸವಾಗಿದ್ದ.
ಫೆ.22 ರಂದು ಆದಿತ್ಯ ಕಾಲೇಜಿಗೆಂದು ತೆರಳಿದ್ದು, ಸಂಜೆ ವೇಳೆ ವಾಪಾಸ್ಸು ಬಾರದ ಹಿನ್ನೆಲೆ ಕಾಲೇಜಿನಲ್ಲಿ ವಿಚಾರಿಸಿದಾಗ ಅಂದು ಆತ ಕಾಲೇಜಿಗೆ ತೆರಳಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯವರ ಬಳಿ ವಿಚಾರಿಸಿದಾಗ ಆತ ಮನೆಗೂ ತೆರಳದೇ ಇದ್ದು, ವಸತಿ ನಿಲಯದ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದಾಗ ಫೆ.22 ರಂದು ಆದಿತ್ಯ ಶಾಲಾ ಸಮವಸ್ತ್ರ ಧರಿಸಿ ಕಾಲೇಜು ಬ್ಯಾಗ್ ಸಮೇತ ಹೋಗಿದ್ದು ಕಂಡು ಬಂದಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದಾಗ ಆತ ಪತ್ತೆಯಾಗಿಲ್ಲ ಎಂದು ವಸತಿ ನಿಲಯದ ಮೇಲ್ವಿಚಾರಕರು ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಆದಿತ್ಯ ಮುಂಬೈಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪುತ್ತೂರು ನಗರ ಠಾಣೆಗೆ ಕರೆ ತರಲಿದ್ದಾರೆ ಎಂದು ತಿಳಿದು ಬಂದಿದೆ.