ಉಡುಪಿ: ಫಿನಾಯಿಲ್ ಮಾರುವ ಸೋಗಿನಲ್ಲಿ ಬಂದು ಮೂರ್ಛೆ ತಪ್ಪಿಸಿ ಚಿನ್ನಾಭರಣ ಕಳ್ಳತನ ಮಾಡುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ. ಈಗಾಗಲೇ ಈ ಫಿನಾಯಿಲ್ ಗ್ಯಾಂಗ್ ತನ್ನ ಕೈ ಚಳಕ ತೋರಿಸಿ ಹಲವು ಕಡೇ ಜನರನ್ನು ಯಾಮಾರಿಸಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ನಡೆದಿದೆ.
ಫಿನಾಯಿಲ್ ಮಾರಾಟ ಮಾಡುವರಂತೆ ಬರುವ ಈ ಮಹಿಳೆಯರ ಗ್ಯಾಂಗ್ ಐದರಿಂದ ಆರು ಮಂದಿ ಸದಸ್ಯರನ್ನು ಹೊಂದಿರುವ ತಂಡ. ಆಯ್ದ ಮನೆಗಳಿಗೆ ತೆರಳುವ ಈ ತಂಡ ಫಿನಾಯಿಲ್ ಮಾರಾಟ ಮಾಡುವವರಂತೆ ನಟಿಸುತ್ತದೆ. ತಮ್ಮಲ್ಲಿ ವಿವಿಧ ಪ್ಲೇವರ್ ನ ಫಿನಾಯಿಲ್ ಇದೇ ಎಂಬಂತೆ ತಂಡದ ಸದಸ್ಯರು ನಟಿಸುತ್ತಾರೆ. ಬಾಟಲಿಯಲ್ಲಿರುವ ಫಿನಾಯಿಲ್ ನ ವಾಸನೆ ತೋರಿಸಿವ ನೆಪದಲ್ಲಿ ಮನೆ ಮಾಲಕಿಗೆ ತಮ್ಮ ದ್ರಾವಣ ಇರುವ ಬಾಟಲಿಯ ಪರಿಮಳ ಗ್ರಹಿಸುವಂತೆ ಪ್ರೇರೇಪಿಸುತ್ತಾರೆ.
ಈ ಬಾಟಲಿಯ ಪರಿಮಳ ಗ್ರಹಿಸುತ್ತಿದ್ದಂತೆ ಮನೆಯಲ್ಲಿದ್ದವರು ಮೂರ್ಛೆ ಹೋಗುತ್ತಾರೆ .ಇದೇ ಸಂದರ್ಭ ಬಳಸಿಕೊಂಡು ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗುತ್ತಾರೆ. ಸದ್ಯ ಈ ಗ್ಯಾಂಗ್ ಉಡುಪಿ ನಗರಕ್ಕೆ ಕಾಲಿಟ್ಟಿದೆ.ಇಂಥವರು ಯಾರಾದರೂ ಅಪರಿಚಿತರು ಸಂಶಯಾಸ್ಪದವಾಗಿ ತಮ್ಮ ಮನೆ ಮುಂದೆ ಓಡಾಡಿಕೊಂಡಿದ್ದರೆ ಅಂಥವರು ಕಂಡುಬಂದರೆ ಅವರಿಂದ ದೂರವಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.