ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಪುನಃ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಬಾರಿ ಕೊರೊನಾಕ್ಕೆ ಲಸಿಕೆ ಇರಲಿಲ್ಲ. ಆದರೆ, ಈ ಬಾರಿ ಲಸಿಕೆ ಇದೆ. ಅಲ್ಲದೇ ಕೊರೊನಾಕ್ಕೆ ಹೇಗೆ ಚಿಕಿತ್ಸೆ ನೀಡುವುದು ಎನ್ನುವ ವಿಚಾರದ ಬಗ್ಗೆ ತಿಳಿದಿದೆ. ಈ ಹಿನ್ನೆಲೆ ಜನರು ಸೋಂಕಿನ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ” ಎಂದಿದ್ದಾರೆ.
“ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್, ಸೀಲ್ ಡೌನ್ ಹಾಗೂ ನೈರ್ಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.