ಪುತ್ತೂರು: ಮಹಿಳೆಯೊಬ್ಬರು ಒಲೆಯಲ್ಲಿ ಮಣ್ಣಿ ತಯಾರಿಸುತ್ತಿರುವ ವೇಳೆ ನೈಟಿಗೆ ಬೆಂಕಿ ತಾಗಿ ತೀವ್ರವಾಗಿ ಸುಟ್ಟು ಗಾಯಗೊಂಡು, ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಡೆದಿದೆ .
ಮೃತರನ್ನು ಕಮಲ(59) ಎನ್ನಲಾಗಿದೆ.
ಕಮಲ ರವರು ಮಾ.4 ರಂದು ಮಧ್ಯಾಹ್ನ ಮಣ್ಣಿ ತಯಾರಿಸುತ್ತಿರುವ ವೇಳಿ ಆಕಸ್ಮಿಕವಾಗಿ ನೈಟಿಗೆ ಬೆಂಕಿ ತಗುಲಿದ್ದು, ಈ ವೇಳೆ ಮೈತುಂಬಾ ಬೆಂಕಿ ಹರಡಿ ಸುಟ್ಟು ಗಂಭೀರ ಗಾಯಗಳಾಗಿತ್ತು .
ಕೂಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

























