ವಿಟ್ಲ: ಪೇಪರ್ ಪ್ಲೇಟ್ ಸೇವಾ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಮಾ.6 ರಂದು ಮೈರಾದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಗಜ್ಜೀವನ್ ರಾಮ್ ಶೆಟ್ಟಿ ಕ್ಲಬ್ ಮೆಂಬರ್ ಎಲ್. ಐ. ಸಿ. ಆಫ್ ಇಂಡಿಯಾ ಹಾಗೂ ಕೇಪು ಗ್ರಾಮ ಪಂಚಾಯತ್ ಸದಸ್ಯರು, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಗೌಡ, ರಾಜೇಶ್ ಕರವೀರ, ಭಗವತಿ ಸಂಕೀರ್ಣದ ಮಾಲಕರಾದ ಅಶೋಕ್ ಆಗಮಿಸಿದ್ದರು. ಮೋನಪ್ಪ ಮೂಲ್ಯ, ಹರಿ ಪೇಪರ್ ಪ್ಲೇಟ್ ಮತ್ತು ಹಾಳೆ ತಟ್ಟೆ ಸರ್ವಿಸ್ ಸೆಂಟರ್ ಮೈರದ ಮಾಲಕರಾದ ಹರೀಶ್ ಕಂಬಳಬೆಟ್ಟು ಹಾಗೂ ಮತ್ತಿತರರು ಉಪಸ್ಥಿತರಿದ್ದರು.