ಬಂಟ್ವಾಳ: ಕೆದಿಲ ಗ್ರಾಮದ ಒಂದನೇ ಬೂತ್ ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯಕ್ರಮವು ಕೆದಿಲದ ಸತ್ತಿಕಲ್ಲಿನ ಮುಖ್ಯರಸ್ತೆಯ ಬದಿಯಲ್ಲಿ ನಡೆಯಿತು.
ಬಿಜೆಪಿಯ ಬೂತ್ ಅಧ್ಯಕ್ಷ ಉಮರಬ್ಬರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಧನಂಜಯ ಮತ್ತು ಉಪಾಧ್ಯಕ್ಷ ಉಮೇಶ್ ಮುರುವ, ಶಕ್ತಿಕೇಂದ್ರ ಪ್ರಮುಖರಾದ ಪದ್ಮನಾಭ ಭಟ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ನ್ಯಾಯ ಜಾಗರಣ ಪ್ರಮುಖ್ ಅರುಣ್ ಗಣಪತಿ ಭಟ್, ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್,
ಹಿಂದು ಜಾಗರಣ ವೇದಿಕೆಯ ಕೆದಿಲ ಗ್ರಾಮ ಕಾರ್ಯದರ್ಶಿ ಸತೀಶ ಕುಲಾಲ್ ಗಡಿಯಾರ, ಬಿಜೆಪಿ ಬೂತ್ ಕಾರ್ಯದರ್ಶಿ ಶಿವರಾಮ ಕುಲಾಲ್ ,ಸಂಚಾಲಕ ಪ್ರಶಾಂತ್ ಕುಲಾಲ್, ಕಾರ್ಯಕರ್ತರಾದ ಗುರುವಪ್ಪ ಕುಲಾಲ್ ವೆಂಕಪ್ಪ ಕುಲಾಲ್ ,ನೀಲೇಶ್ ರಾಜಾಲು, ಲಕ್ಷ್ಮಣ ಕುಲಾಲ್, ದಿವಾಕರ ಕುಲಾಲ್, ಸಂತೋಷ್ ಕುಲಾಲ್ ಮತ್ತು ಉದಯಕುಮಾರ್ ಕಿರಿಯ ಕಾರ್ಯಕರ್ತರಾದ ದಿವ್ಯಾಂಶ್ ಕುಲಾಲ್ ಮತ್ತು ಶ್ರೀಕೃಷ್ಣ, ವೆಂಕಟೇಶ್, ವರುಣ್ ಕೃಷ್ಣ ಹರೀಶ್ ಕಜೆ ಹಾಗೂ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.