ಪುತ್ತೂರು: ಯಂಗ್ ಬ್ರಿಗೇಡ್ ನ ವತಿಯಿಂದ ಉನೈಸ್ ಪೆರ್ಲಾಪ್ ಹಾಗೂ ಶರೀಫ್ ಬಲ್ನಾಡು ಇವರ ನೇತೃತ್ವದಲ್ಲಿ ಪುತ್ತೂರಿನ ಮಾಜಿ ಶಾಸಕಿ ಹಾಗೂ ಮಾಜಿ ಸಂಸದೀಯ ಕಾರ್ಯದರ್ಶಿಗಳಾದ ಶಕುಂತಳಾ ಶೆಟ್ಟಿಯವರ ಅಭಿಮಾನದಿಂದ ಅವರ ಹುಟ್ಟುಹಬ್ಬದ ಪ್ರಯುಕ್ತ ರಚಿಸಲಾದ ಕನ್ನಡ ಆಲ್ಬಂ ಹಾಡನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಆಲ್ಬಂ ಹಾಡನ್ನು ಹಾಡಿದಂತಹ ಫಾಝಿಲ್ ಪರ್ತಿಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ್ ರೈ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ ಹಾಗೂ ಯಂಗ್ ಬ್ರಿಗೇಡ್ ನ ಪುತ್ತೂರು ನಗರ ಸಭೆ ಸದಸ್ಯರಾದ ರಿಯಾಝ್ ವಲತ್ತಡ್ಕ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ,ರೋಷನ್ ರೈ ಬನ್ನೂರು, ಪ್ರಕಾಶ್ ಪುರುಷರಕಟ್ಟೆ,ಪೂರ್ನೇಶ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಸನಧ್ ಯೂಸುಫ್ ಹಾಗೂ ಎನ್. ಎಸ್. ಯು. ಐ. ನ ನಾಯಕರಾದ ಬಾತೀಷ್ ಅಳಕೆಮಜಲು, ಲೆಸ್ಟರ್ ಪಿಂಟೋ, ತಮೀಝ್ ಕೋಲ್ಪೆ ಉಪಸ್ಥಿತರಿದ್ದರು.