ಉಡುಪಿ: ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲೆಂದು ತೆರಳಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಉಡುಪಿ ಕುಂದಾಪುರದ ಬೈಂದೂರಿನಲ್ಲಿರುವ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.
ಬೈಂದೂರು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ (23) ನೀರುಪಾಲಾಗಿ ಮೃತಪಟ್ಟ ಯುವಕ. ಘಟನೆಯಲ್ಲಿ ಮೃತ ಶಶಿಧರ್ ದೇವಾಡಿಗನ ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.