ಪುತ್ತೂರು: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶ್ರೀ ಕೊರಗಜ್ಜ ಸೇವಾ ಸಮಿತಿ ಕನಕದಾಸ ಕಾಲೋನಿ ಪಡೀಲ್ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ನೂತನ ಕಟ್ಟೆಯ ಪ್ರತಿಷ್ಠೆ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಶ್ರೀ ಸತ್ಯ ನಾರಾಯಣ ಪೂಜೆಯು ಮಾ.27 ರಂದು ಕನಕದಾಸ ಕಾಲೋನಿ ಪಡೀಲ್ ನಲ್ಲಿ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಮುಗೇರ ಸಂಘದ ಅಧ್ಯಕ್ಷರಾದ ಡಾ. ರಘು ಬೆಳ್ಳಿಪ್ಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಗರ ಸಭೆ ಮಾಜಿ ಅಧ್ಯಕ್ಷರಾದ ವಾಣಿ ಶ್ರೀಧರ್, ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ಪ್ರಾದೇಶಿಕ ಅಧಿಕಾರಿ ತಿಮ್ಮಯ್ಯ ನಾಯ್ಕ, ಪುತ್ತೂರು ನಗರಸಭಾ ಸದಸ್ಯರಾದ ಪದ್ಮನಾಭ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರಿನ ಯೋಜನಾಧಿಕಾರಿ ಆನಂದ ಕೆ. ಆಗಮಿಸಲಿದ್ದಾರೆ.
ರಾಜ್ಯ ಪ್ರಶಸ್ತಿ ವಿಜೇತರಾದ ರವಿ ರಾಮಕುಂಜ,ಅಂಗಾರ ಪಿ. ಹಾರಾಡಿ, ಜನಮೆಚ್ಚಿದ ಅಧಿಕಾರಿ, ಅಬಕಾರಿ ಇಲಾಖೆ ಪುತ್ತೂರು, ಕಾರ್ಯದರ್ಶಿ ಮುಗೇರ ಸಂಘ ಪುತ್ತೂರು, ಕನಕದಾಸ ಕಾಲೋನಿಯ ಬಾಬು ಮೊಗೇರ, ಕನಕದಾಸ ಕಾಲೋನಿಯ ಮಾಧವ ಮೊಗೇರ ರವರು ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಡರಿದ್ದಾರೆ.