ಪುತ್ತೂರು: ಜೇಸಿಐ ಪುತ್ತೂರು ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಹಬ್ಬ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ. ಯದುರಾಜ್ ರವರು ಆಗಮಿಸಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಜೇಸಿಐ ನ ಅಧ್ಯಕ್ಷರಾದ ಶಶಿರಾಜ್ ರೈ, ಜೇಸಿಐನ ಮಾಜಿ ಅಧ್ಯಕ್ಷರಾದ ಪಶುಪತಿ ಶರ್ಮಾ, ಜೇಸಿಐ ನ ಸದಸ್ಯರಾದ ರಮೇಶ್ ಕೆ. ವಿ. ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಜನರ ಸೇವೆ ಮಾಡಿದ ಪುತ್ತೂರಿನ ಸರಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಪವಿತ್ರ ರವರಿಗೆ ಮತ್ತು ಯಶಸ್ವಿ ಮಹಿಳಾ ಉದ್ಯಮಿ ಮಲ್ಲಿಕಾ ಕುಕ್ಕಾಡಿ ರವರಿಗೆ ಸನ್ಮಾನಿಸಲಾಯಿತು.