ವಿಟ್ಲ: ಮುಸ್ಲಿಂ ಸಮುದಾಯದವರನ್ನು ಅವಮಾನಿಸಿ, ಕೊಲೆ ಮಾಡಲು ಪ್ರೇರೇಪಿಸಿ ಮಾತನಾಡಿದ್ದಾರೆಂದು ಆರೋಪಿಸಿ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನಿರೂಪಕ ಅರುಣ್ ಬಡಿಗಾರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪುಣಚ ಗ್ರಾಮದ ಪರಿಯಾಲ್ತಡ್ಕ ಪೈಸಾರಿ ನಿವಾಸಿ ನಝೀರ್ ಶಾಫಿ ಎಂಬವರು ವಿಟ್ಲ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನಲ್ಲಿ “ಕೊಲೆ ಮತ್ತು ರಾಜಕೀಯ” ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಚರ್ಚಾಕೂಟದಲ್ಲಿ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನ ನಿರೂಪಕ ಅರುಣ್ ಬಡಿಗಾರ್ ಎಂಬುವರು ಮಾತನಾಡುತ್ತ, ಮುಸ್ಲಿಂ ಸಮುದಾಯದವರನ್ನು ಅವಮಾನಿಸುವ ಉದ್ದೇಶದೊಂದಿಗೆ ಮುಸ್ಲಿಮರಿಗೆ ಹಾಕುಕೆ ಬಟ್ಟೆ ಇಲ್ಲ, ತಿನ್ನೋಕ್ಕೆ ಹಿಟ್ಟು ಇಲ್ಲದೆ ಇದ್ರೂ ಕೂಡ 4-5 ಮದುವೆ ಮಾಡಿ ಕೊಳ್ಳುವ ಅವಕಾಶ ಮಾಡಿ ಕೊಟ್ಟರು, 4-5 ಮಕ್ಕಳನ್ನು ಮಾಡಲು ಕೂಡ, ಪಾಪುಲೇಷನ್ ಬೆಳೆಯಳಿ ಎಂಬ ಅವಕಾಶ ಮಾಡಿ ಕೊಟ್ಟರು, ತುಕಡೇ ತುಕಡೇ ಗ್ಯಾಂಗ್ ನ ಬೆಂಬಲಕ್ಕೆ ನಿಂತ್ರಿ ನೀವು, ಈ ದೇಶವನ್ನು ಇಬ್ಬಾಗ ಮಾಡುವಂತಹ ಗ್ಯಾಂಗ್ ಜೊತೆ ನಿಂತು ಕೊಂಡ್ರಿ ಎಂದು ಟಿವಿ ನಿರೂಪಕ ಅರುಣ್ ಬಳಿಗಾರ್ ಹೇಳಿದ್ದಾರೆ.
ಮುಸ್ಲಿಂ ಸಮುದಾಯದವರನ್ನು ಅವಮಾನಿಸಿ, ಮುಸ್ಲಿಂ ಸಮುದಾಯವರು ಕೆಟ್ಟವರು ಎಂದು ಸಮಾಜದಲ್ಲಿ ಬಿಂಬಿಸುವ ಮತ್ತು ಮುಸ್ಲಿಂ ಸಮುದಾಯದವನ್ನು ವಂಶ ಹತ್ಯೆ ನಡೆಸಲು ಪ್ರೇರೇಪಿಸುದು ಕಂಡುಬರುತ್ತದೆ ಅದು ಅಲ್ಲದೆ ಈ ದೇಶದಲ್ಲಿ ಹಿಂದು- ಮುಸ್ಲಿಂ ಪರಸ್ಪರ ಕಚ್ಚಾಡಿ ಇಲ್ಲಿ ಕೋಮು ಗಲಭೆ ಆಗಲು ಪ್ರಯತ್ನ ಮಾಡುತ್ತಾ ಇದ್ದಾನೆ. ಇಂತಹ ವಿಚಾವನ್ನು ಅರುಣ್ ಬಡಿಗಾರ್ ರವರು ಈ ರೀತಿಯಾಗಿ ತಮ್ಮ ಚಾನಲ್ ನ ಚರ್ಚಾಕೂಟದಲ್ಲಿ ಮಾತನಾಡಿದ್ದಾರೆ. ಇವರ ಈ ಹೇಳಿಕೆಯಿಂದ ಮುಸ್ಲಿಂ ಸಮುದಾಯದವನಾದ ನನಗೆ ಅವಮಾನ ಆಗಿದೆ ಅಲ್ಲದೇ ನನ್ನ ಮನಸ್ಸಿಗೆ ಬಹಳ ನೋವು ಉಂಟಾಗಿದೆ. ಸಮಾಜದಲ್ಲಿ ಭಾವೈಕ್ಯತೆ ಹಾಳು ಮಾಡುವ ನಿಟ್ಟಿನಲ್ಲಿ ಅರುಣ್ ಬಡಿಗಾರ್ ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ತಮ್ಮ ಸುದ್ದಿ ವಾಹಿನಿಯಲ್ಲಿ ಮಾತನಾಡಿರುತ್ತಾರೆ. ಆದುದರಿಂದ ಸಂವಿಧಾನ ವಿರೋಧಿ ಹೇಳಿಕೆ ನೀಡಿ, ಮುಸ್ಲಿಂ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದ ಅರುಣ್ ಬಡಿಗಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.