ವಿಟ್ಲ: ಕಲ್ಲಡ್ಕ-ಸಾರಡ್ಕ ರಸ್ತೆಯ ಮರು ಡಾಮರೀಕರಣ ಸಂದರ್ಭದಲ್ಲಿ ಮೈರ ಅಪಘಾತ ವಲಯದ ತಿರುವು ರಸ್ತೆ ಅಗಲೀಕರಣಗೊಳಿಸಲಾಯಿತು.
ಈ ಬಗ್ಗೆ ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಮತ್ತು ಪುರುಷೋತ್ತಮ ಕಲ್ಲಂಗಳ ರವರು ಪಿಡಬ್ಲ್ಯೂಡಿ ಇಂಜಿನಿಯರ್ ಪ್ರೀತಮ್ ಹಾಗೂ ಕಾಂಟ್ರಾಕ್ಟರ್ ರಲ್ಲಿ ಮನವಿ ಮಾಡಿದ್ದರು. ಈ ರಸ್ತೆ ಅಪಘಾತ ವಲಯವಾಗಿದ್ದರಿಂದ ಅಗಲೀಕರಣ ಸಾರ್ವಜನಿಕರ ಬೇಡಿಕೆಯಾಗಿತ್ತು.