ವಿಟ್ಲ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಲಾಯಿತು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಮೋಹನ್ ದಾಸ್ ಉಕ್ಕುಡ ಬಿಜೆಪಿಯ ವಿಜಯದ ಯಾತ್ರೆಯು ಕರ್ನಾಟಕದಲ್ಲಿಯೂ ಕೂಡ ಮುಂದಿನ ದಿನದಲ್ಲಿ ಮುಂದುವರಿಯಲಿದೆ, ಮೋದಿ ಹಾಗೂ ಯೋಗಿಯ ನಾಯಕತ್ವವನ್ನು ದೇಶ ಒಪ್ಪಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಶಕ್ತಿ ಕೇಂದ್ರ ಪ್ರಮುಖ್ ವೀರಪ್ಪ ಗೌಡ, ಪ್ರಮುಖರಾದ ಶ್ರೀಕೃಷ್ಣ ವಿಟ್ಲ, ರಾಮದಾಸ್ ಶೆಣೈ, ಜಗದೀಶ್ ಪಾಣೆಮಜಲು, ಪುನೀತ್ ಮಾಡ್ತಾರ್, ರವಿ ಕೂಡೂರು, ಕೃಷ್ಣ ಮುದೂರು, ವಸಂತ ಎರುಂಬು, ಸದಾನಂದ ಗೌಡ ಸೇರಾಜೆ, ಪಟ್ಟಣ ಪಂಚಾಯತ್ ಸದಸ್ಯರಾದ ಜಯಂತ್ ಸಿಎಚ್, ವಸಂತ ಕೆ., ಕೃಷ್ಣ ಎನ್, ಯುವಮೋರ್ಚಾದ ಸುರೇಶ್, ಪ್ರಕಾಶ್ ಕೈಂತಿಲ, ತೀರ್ಥೇಶ್ ಇರಂದೂರು ಉಪಸ್ಥಿತರಿದ್ದರು.