ಪುತ್ತೂರು: ಬೀಡಿ ಬ್ರಾಂಚ್‌ನಿಂದ ತಂಬಾಕು ಮತ್ತು ಬೀಡಿಗಳು ಕಳವಾದ ಘಟನೆ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಬೀಡಿ ಬ್ರಾಂಚ್ ನಲ್ಲಿ ಮಾ.9 ರಂದು ನಡೆದಿತ್ತು.
ಕೆಮ್ಮಿಂಜೆ ನಿವಾಸಿ ಕೆ.ಮಹಮ್ಮದ್ ಅವರು ಕೂರ್ನಡ್ಕದಲ್ಲಿರುವ ಪಿ.ಕೆ., ಇಸ್ಮಾಯಿಲ್ ಅವರ ಕಟ್ಟಡದಲ್ಲಿ ಬೀಡಿ ಬ್ರಾಂಚ್ ಹೊಂದಿದ್ದು, ಮಾ.8ರಂದು ಸಂಜೆ ಅಂಗಡಿಯ ಶಟರ್ ಹಾಕಿ ಬೀಗ ಹಾಕಿ ಮನೆಗೆ ಹೋಗಿದ್ದರು.
ಮಾ.9ರಂದು ಬೆಳಿಗ್ಗೆ ಅಂಗಡಿ ಬಳಿ ಬಂದಾಗ ಶಟರ್‌ನ ಬೀಗ ಒಡೆದು ಹೋಗಿದ್ದು, ಪರಿಶೀಲಿಸಿದಾಗ ಅಂಗಡಿಯೊಳಗಿದ್ದ 2 ಗೋಣಿ ತಂಬಾಕು ಮತ್ತು ಸುಮಾರು 18 ಸಾವಿರ ಬೀಡಿಗಳು ಕಳವಾಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ 18 ಸಾವಿರ ರೂ. ಆಗಿದ್ದು, ಘಟನೆ ಕುರಿತು ಕೆ.ಮಹಮ್ಮದ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂರ್ನಡ್ಕದಲ್ಲಿ ಬೀಡಿ ಬ್ರಾಂಚ್, ಮನೆಯ ಶೆಡ್‌ನಿಂದಲೂ ಕಳವು ಮಾಡಿದ ಆರೋಪಿಯನ್ನು ಮಾ.10 ರಂದು ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.