ಉಳ್ಳಾಲ: ಖ್ಯಾತ ಕೊರಿಯೋಗ್ರಾಫರ್ ಆಗಿ ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿಸೋಜಾ (48) ಅವರು ಇಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು ಟಾಪ್ ಈಗಲೈಸ್ ನೃತ್ಯ ತಂಡ ಕಟ್ಟಿ ಕರ್ನಾಟಕ ಮಾತ್ರವಲ್ಲದೆ ಮುಂಬಯಿ,ಗೋವಾದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.
ರೋಷನ್ ಡಿಸೋಜಾ ಅವರು ಕರಾವಳಿಯ ಆರಾಧ್ಯ ಸ್ವಾಮಿ ಕೊರಗಜ್ಜನ ಅಪ್ರತಿಮ ಭಕ್ತರಾಗಿದ್ದರು.
ಮೃತರು ಅವಿವಾಹಿತರಾಗಿದ್ದು ತಾಯಿ, ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



























