ಮಂಗಳೂರು: ಮನೆಯಿಂದ ಕೆಲಸಕ್ಕೆಂದು ಹೇಳಿ ಹೊರಗಡೆ ಹೋದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಷಿತಾ ಸಾಲ್ಯಾನ್ (30) ನಾಪತ್ತೆಯಾದ ಮಹಿಳೆ.
ವರ್ಷಿತಾ ಮಾ.07 ರಂದು ಬೆಳಿಗ್ಗೆ ಕುಳಾಯಿ ಗ್ರಾಮದ ಮನೆಯಿಂದ ಕೆಲಸಕ್ಕೆಂದು ಅತ್ತೆ ಪದ್ಮಾವತಿ ರವರಲ್ಲಿ ಹೇಳಿ ಹೊರಗಡೆ ಹೋದವರು ಮಧ್ಯಾಹ್ನ 12-30 ಗಂಟೆಗೆ ಪೋನ್ ಮಾಡಿ ಸ್ಟೇಟ್ ಬ್ಯಾಂಕ್ನಲ್ಲಿ ಇರುವುದಾಗಿ ತಿಳಿಸಿ, ಆ ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿದವರು ಈವರೆಗೆ ಪತ್ತೆಯಾಗಿರುವುದಿಲ್ಲ. ಇವರು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಕಾಣೆಯಾದವರ ಚಹರೆ:
- ಹೆಸರು: ವರ್ಷಿತಾ
- ಪ್ರಾಯ 30 ವರ್ಷ
- ಎತ್ತರ: 5 ಅಡಿ 4 ಇಂಚು
- ಮೈಬಣ್ಣ:.ಬಿಳಿ ಮೈಬಣ್ಣ, ದಪ್ಪ ಶರೀರ,
- ಗೊತ್ತಿರುವ ಭಾಷೆಗಳು: ಕನ್ನಡ, ಇಂಗ್ಲೀಷ್, ತುಳು, ಮೆರೂನ್ ಬಣ್ಣದ ಕುರ್ತ ಹಾಕಿರುತ್ತಾರೆ.