ಪುತ್ತೂರು: ಜನಮೆಚ್ಚಿದ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಮೂಡಂಬೈಲು ಜಗನ್ನಾಥ ಶೆಟ್ಟಿ ರವರು ಮಾ.10 ರಂದು ನಿಧನರಾದರು.
ಮೂಡಂಬೈಲು ಜಗನ್ನಾಥ ಶೆಟ್ಟಿ ರವರು ಸುಮಾರು 30 ವರ್ಷಗಳ ಕಾಲ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಸಲ್ಲಿಸಿ 2012 ರಲ್ಲಿ ನಿವೃತ್ತರಾಗಿದ್ದರು.
ತೀರಾ ಗ್ರಾಮೀಣ ಪ್ರದೇಶವಾದ ಮೂಡಂಬೈಲು ಶಾಲೆಯ ಮಕ್ಕಳ ತಂಡ ಖೋಖೋ ಪಂದ್ಯಾಟದಲ್ಲಿ ರಾಜ್ಯಮಟ್ಟದವರೆಗೂ ಭಾಗವಹಿಸುವಂತೆ ಮಾಡಿದ ಕೀರ್ತಿ ಅವರದ್ದಾಗಿದ್ದು, ಮೂಡಂಬೈಲು ಎಂದರೆ ಜಗನ್ನಾಥ ಶೆಟ್ಟರ ಶಾಲೆ ಎಂಬಷ್ಟರ ಮಟ್ಟಿಗೆ ಅವರ ಹೆಸರು ಪ್ರಸಿದ್ದಿ ಪಡೆದಿತ್ತು.
ಸಾಗರದ ನಿರ್ಮಲಾ ಕಾನ್ವೆಂಟ್ ಮತ್ತು ಕಲ್ಲಡ್ಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿದ ಇವರು ಸುಮಾರು 30 ವರ್ಷಗಳ ಕಾಲ ಮೂಡಂಬೈಲು ಶಾಲೆಯಲ್ಲಿ ಶಿಕ್ಷಕರಾಗಿದ್ದು, ಶಾಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ದಿ. ಮೂಡಂಬೈಲು ತುಕ್ರಪ್ಪ ಶೆಟ್ಟರ ಮಕ್ಕಳಲ್ಲಿ ಒಬ್ಬರಾಗಿದ್ದು ತಂದೆಯ ವೃತ್ತಿಯನ್ನು ಮುಂದುವರೆಸಿದ್ದರು.
ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಅಧ್ಯಾಪಕರು ಮತ್ತು ಹಳೆ ವಿದ್ಯಾರ್ಥಿಗಳು ಜಗನ್ನಾಥ ಶೆಟ್ಟಿ ರವರ ನಿಧನಕ್ಕೆ ಸಂತಾಪ ಸೂಚಿಸಿದರು..