ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿಯನ್ನು ಮತ್ತು ಇಲೆಕ್ಟ್ರೀಷಿಯನ್ ಮಾಡುವ ಕಾರ್ಮಿಕರಿಗೆ ಇಲೆಕ್ಟ್ರೀಷಿಯನ್ ಕಿಟ್ ವಿತರಣಾ ಕಾರ್ಯಕ್ರಮ ಮಾ.12 ರಂದು ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು.
15 ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು, ಟ್ರಸ್ಟ್ ನ ಮೂಲಕ ಇದುವರೆಗೆ ಸುಮಾರು 3825ಮಂದಿ ಕಾರ್ಮಿಕರಿಗೆ ಈಗಾಗಲೇ ಉಚಿತವಾಗಿ ಗುರುತಿನ ಚೀಟಿಯನ್ನು ಮಾಡಿಕೊಡಲಾಗಿದೆ ಮತ್ತು ಮೂರು ವರ್ಷಕ್ಕೊಮ್ಮೆ ಕಾರ್ಮಿಕರ ಗುರುತಿನ ಚೀಟಿಯನ್ನು ನವೀಕರಣ ಮಾಡಿಕೊಡಲಾಗುವುದು ಅದನ್ನು ಕೂಡ ಟ್ರಸ್ಟ್ ನ ಮುಖಾಂತರ ಉಚಿತವಾಗಿ ಮಾಡಿಕೊಡಲಾಗುವುದು, ಅಲ್ಲದೆ ಕಾರ್ಮಿಕರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತದೆ. ವಿದ್ಯಾರ್ಥಿ ವೇತನ,ಮದುವೆ, ಅನಾರೋಗ್ಯದ ಚಿಕಿತ್ಸೆ, ಪಿಂಚಣಿ ಸೌಲಭ್ಯ ಇದರ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ಪೂಜಾರಿ ಸಂಪ್ಯ ಉಪಸ್ಠಿತರಿದ್ದರು. ಟ್ರಸ್ಟ್ ನ ಸಿಬ್ಬಂದಿ ಲಿಂಗಪ್ಪ ಕುದ್ಮಾನು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಮತ್ತು ಪ್ರವೀಣ್ ಸಹಕರಿಸಿದರು.
































