ಕೋಲ್ಕತ್ತ: ಪುಸ್ತಕ ಮೇಳದಲ್ಲಿ ಪಿಕ್‌ಪಾಕೆಟ್ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೊಲ್ಕತ್ತ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ನಡೆದ ಅಂತರಾಷ್ಟ್ರೀಯ ಕೊಲ್ಕತ್ತ ಪುಸ್ತಕ ಮೇಳದಲ್ಲಿ ನಟಿ ರೂಪಾ ದತ್ತ ಪಿಕ್ ಪಾಕೆಟ್ ಮಾಡಿ ಸಾರ್ವಜನಿಕರ ಕಣ್ಣಿಗೆ ಬೀಳುವ ಭಯದಲ್ಲಿ ಕಸದ ಬುಟ್ಟಿಗೆ ಬ್ಯಾಗ್ ಎಸೆಯುತ್ತಿದ್ದ ವೇಳೆ ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ನೋಡಿದ್ದಾರೆ.
ತಕ್ಷಣ ಸಂಶಯಗೊಂಡು ಮಹಿಳೆಯನ್ನು ವಿಚಾರಿಸಿದಾಗ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ. 75 ಸಾವಿರ ನಗದು ಇದ್ದ ಬ್ಯಾಗನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಸದ್ಯ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಆರೋಪದಲ್ಲಿ ಬಂಧಿಸಲಾಗಿದ್ದು ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.