ಬೆಂಗಳೂರು: ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ರವರ ಪೂರ್ಣ ಪೀಠ ತೀರ್ಪು ನೀಡಿದೆ.
ಹಿಜಾಬ್ ವಿವಾದದಲ್ಲಿ ಸರ್ಕಾರದ ಪರವಾದ ಮಾಡಿದ ತಂಡದಲ್ಲಿ ಪುತ್ತೂರಿನ ಖ್ಯಾತ ವಕೀಲದಾರ ಅರುಣ್ ಶ್ಯಾಮ್ ರವರು ಕೂಡ ಕಾರ್ಯ ನಿರ್ವಹಿಸಿದ್ದರು.
ಕೆಲ ವರ್ಷಗಳ ಹಿಂದೆ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನಿಯುಕ್ತರಾದ ಅರುಣ್ ಶ್ಯಾಮ್ ರವರು ಪುತ್ತೂರಿನ ಖ್ಯಾತ ವಕೀಲರಾಗಿದ್ದು, ಯಾವುದೇ ಪ್ರಕರಣವಾದರೂ ಸರಿ ಸಲೀಸಾಗಿ ಅದನ್ನು ನಿರೂಪಿಸುವ ಚಾಣಾಕ್ಷತನವನ್ನು ಹೊಂದಿದ್ದಾರೆ.
ಅರುಣ್ ಶ್ಯಾಮ್ ರವರು ಕಲ್ಲಡ್ಕ ಶ್ರೀರಾಮದಲ್ಲಿ ಪ್ರೌಢ ಶಿಕ್ಷಣ, ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ವಿವೇಕಾನಂದ ಮಹಾವಿದ್ಯಾಲಯ ಪುತ್ತೂರಿನಲ್ಲಿ ಪದವಿ ಹಾಗೂ ಕಾನೂನು ಪದವಿಯನ್ನು ಪಡೆದಿದ್ದಾರೆ.
ಹಿಜಾಬ್ ವಿವಾದ ಆರಂಭವಾಗಿ ತಿಂಗಳೇ ಕಳೆದಿದ್ದು, ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿಗಳ ವಿಚಾರದಲ್ಲಿ ಪ್ರಾರಂಭವಾಗಿ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣವನ್ನು ವಿದ್ಯಾರ್ಥಿನಿಯರ ಪರ ವಕೀಲರಾದ ಶತಭಿಷ ಶಿವಣ್ಣ ತಂಡ ಮತ್ತು ಸರ್ಕಾರದ ಪರ , ಪ್ರಭುಲಿಂಗ ನಾವದಗಿ, ಅರುಣ್ ಶ್ಯಾಮ್ ಹಾಗೂ ಇತರರ ತಂಡ ವಾದಿಸಿದ್ದರು.