ಉಳ್ಳಾಲ: ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರೇಕಳ ಗ್ರಾಮದ ಆಲಡ್ಕ ನಿವಾಸಿ ನಿಝಾಂ(31) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಮಾ.16 ರಂದು ಹರೇಕಳ ಸಮೀಪವಿರುವ ಅಂಗನವಾಡಿಯಲ್ಲಿ ಗ್ಯಾಸ್ ಸ್ಟವ್ ದುರಸ್ತಿಗೆಂದು ನಿಝಾಂನನ್ನು ಕರೆಸಲಾಗಿತ್ತು.
ಗ್ಯಾಸ್ ಸ್ಟವ್ ದುರಸ್ತಿಗೊಳಿಸುತ್ತಿದ್ದಂತೆ ಆರೋಪಿ ಅಂಗನವಾಡಿ ಸಹಾಯಕಿಯನ್ನು ಹಿಂದಿನಿಂದ ಅಪ್ಪಿ ಬಳಿಕ ಯಾರಿಗೂ ತಿಳಿಸದಂತೆ ಸೂಚಿದ್ದಾನೆ. ಇದರಿಂದ ನೊಂದ ಸಹಾಯಕಿ ಶಿಕ್ಷಕಿ ಬಳಿ ತಿಳಿಸಿದ್ದು, ಅದರಂತೆ ಹಿರಿಯ ಅಧಿಕಾರಿಗಳಲ್ಲಿ ಶಿಕ್ಷಕಿ ಚರ್ಚಿಸಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಆರೋಪಿ ನಿಝಾಂನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.