ಕಾಸರಗೋಡು: ಸಹೋದರರೊಳಗಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಗೊಂಡ ಘಟನೆ ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ ನಡೆದಿದೆ.
ಉಪ್ಪಳಿಗೆಯ ಥೋಮಸ್ ಡಿಸೋಜ ( 45) ಕೊಲೆಗೀಡಾದವರು. ಆತನ ಸಹೋದರ ರಾಜೇಶ್ ( 37) ಕೃತ್ಯ ನಡೆಸಿದ್ದಾನೆ.
ಮಾ.21 ರ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರ ನಡುವಿನ ಜಗಳವನ್ನು ತಡೆಯಲು ಬಂದ ಥೋಮಸ್ ನ ಸಂಬಂಧಿಕ ವಿಲ್ಫ್ರೆಡ್ ಗೂ ಗಾಯಗಳಾಗಿವೆ.
ಜಗಳ ವಿಕೋಪಕ್ಕೆ ತಿರುಗಿ ರಾಜೇಶನು ಥೋಮಸ್ ನನ್ನು ಇರಿದಿದ್ದು , ಬೊಬ್ಬೆ ಕೇಳಿ ಸ್ಥಳೀಯರು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಥೋಮಸ್ ನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.
ರಾಜೇಶ್ ಬದಿಯಡ್ಕ ಪೊಲೀಸ್ ಠಾಣೆಗೆ ಶರಣಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡ ವಿಲ್ಫ್ರೆಡ್’ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.