ಬೆಂಗಳೂರು: ದ್ವಿಚಕ್ರ ವಾಹನ ಡಿವೈಡರ್’ಗೆ ಡಿಕ್ಕಿಯಾಗಿ ಪುತ್ತೂರಿನ ಯುವಕರು ಗಾಯಗೊಂಡ ಘಟನೆ ಬೆಂಗಳೂರಿನ ರಾಮನಗರದ ಸಮೀಪದಲ್ಲಿ ನಡೆದಿದೆ.
ಗಾಯಗೊಂಡ ಯುವಕನನ್ನು ಪುತ್ತೂರು ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್(21) ಎಂದು ಗುರುತಿಸಲಾಗಿದೆ.
ಸುನೈಫ್ ಪುತ್ತೂರಿನ ಬಸ್ ಸ್ಟಾಂಡ್ ಬಳಿ ಇರುವ ಬ್ಯಾಗ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಕೆಲಸ ಮುಗಿಸಿ ತನ್ನ ಸ್ನೇಹಿತ ರವೂಫ್ ಜೊತೆ ಬೆಂಗಳೂರು ಕಡೆ ಹೊರಟಿದ್ದ. ಇನ್ನೇನು ಬೆಂಗಳೂರು ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಕ್ಟೀವಾ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಆಕ್ಟೀವಾ ಸವಾರ ಸುನೈಫ್ ಗಾಯಗೊಂಡಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಹ ಸವಾರ ಪುತ್ತೂರು ಕೂರ್ನಡ್ಕ ನಿವಾಸಿ ರವೂಫ್(21) ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.