ಮಂಗಳೂರು: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ ಘಟನೆ ಇಂದು ಮಂಗಳೂರು ಹೊರ ವಲಯದ ಉಳ್ಳಾಲದಲ್ಲಿ ನಡೆದಿದೆ.
ಮುನ್ನೂರು ಗ್ರಾಮದ ಸಮೀರ್ (22) ಬಂಧಿತ ಆರೋಪಿ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಜೊತೆ ಆರೋಪಿ ಸಮೀರ್ ನಿನ್ನ ಮೈಮಾಟ ಚೆನ್ನಾಗಿದೆ, ಸ್ನೇಹಿತರನ್ನು ಕರೆದುಕೊಂಡು ಮನೆಗೆ ಬರ್ತೇನೆ ಎಂದು ಅಸಭ್ಯವಾಗಿ ಮಾತನಾಡಿದ್ದು, ಅನುಚಿತವಾಗಿ ವರ್ತಿಸಿದ್ದಾನೆ.
ನೊಂದ ಮಹಿಳೆ ಈ ವಿಚಾರವನ್ನು ತನ್ನ ಮಗನ ಬಳಿ ತಿಳಿಸಿದ್ದು, ಅದರಂತೆ ಆತ ರಿಕ್ಷಾ ಚಾಲಕನ ಬಳಿ ವಿಚಾರಿಸಿದಾಗ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದೇ ವಿಚಾರವನ್ನು ಸಮೀರನ ಅಣ್ಣ ರಮೀಝ್‌ನಲ್ಲಿ ತಿಳಿಸಿದಾಗ ಆತನೂ ಕೂಡ ಬೈದು ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮುನ್ನೂರು ಗ್ರಾಮದ ಆರೋಪಿ ಸಮೀರ್‌ನನ್ನು ಬಂಧಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.