ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ನ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ಮಾ.27 ರಂದು ಪುತ್ತೂರು ಮುಖ್ಯ ರಸ್ತೆಯ ಜಿ. ಎಲ್. ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ನಡೆಯಲಿದೆ.
ನೂತನ ಆಡಳಿತ ಕಚೇರಿಯನ್ನು ಶಾಸಕರಾದ ಸಂಜೀವ ಮಠಂದೂರು ರವರು ಉದ್ಘಾಟನೆಗೊಳಿಸಲಿದ್ದಾರೆ.ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ ಭಟ್ ರವರು ಸಂಸ್ಥೆಯ ಸಂಸ್ಥಾಪಕರಾದ ದಿ. ಜಿ. ಏಲ್.ಆಚಾರ್ಯ ಇರವ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರ ಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಆಗಮಿಸಲಿದ್ದಾರೆ.