ಮಂಗಳೂರು: ತುಳು ಆಲ್ಬಮ್ ಸಾಂಗ್ “ಡಾರ್ಲಿಂಗ್ ನಿಕ್ಕಾದೆ’ ಇದರ ಬಿಡುಗಡೆ ದಿನಾಂಕದ ಪೋಸ್ಟರ್ ಅನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಬಿಡುಗಡೆಗೊಳಿಸಿದರು.
ಶ್ರೀಮಂತ್ರ ಕ್ರಿಯೇಷನ್ ನಡಿಯಲ್ಲಿ, ಪ್ರಜ್ವಲ್ ಗೋಪಾಲ್ ರವರ ನಿರ್ಮಾಪಕತ್ವದಲ್ಲಿ, ಹರ್ಷಿತ್ ಸೋಮೆಶ್ವರ ರವರ ನಿರ್ದೇಶನದಲ್ಲಿ, ಶೆಟ್ಟಿ ಅಜಯ್ ರಾಜ್ ರವರ ಸಾಹಿತ್ಯದಲ್ಲಿ,ಕಾರ್ತಿಕ್ ರೈ ರವರ ಸುಮಧುರ ಕಂಠದಲ್ಲಿ, ಡಿ. ಒ. ಪಿ. ಅರುಣ್ ರೈ ಪುತ್ತೂರು, ಅಭಿಷೇಕ್ ರಾವ್ ರವರ ಸಂಕಲನದಲ್ಲಿ, ಸನೀಶ್ ಅಂಚನ್, ದೇವಿದರ್ಶನ್ ಶೆಟ್ಟಿ, ಭರತ್ ತುಳುವ, ಶಶಾಂಕ್ ಹಾಗೂ ಶಮೀರ್ ಮುಡಿಪು ರವರ ಸಹಕಾರದೊಂದಿಗೆ ಈ ಹಾಡು ಮೂಡಿಬಂದಿದ್ದು, ಈ ಆಲ್ಬಮ್ ಸಾಂಗ್ ನಲ್ಲಿ ತುಳು ಘಟಾನುಘಟಿಗಳ ಸಮ್ಮಿಲನವಿದೆ.
ಶಾಸಕರಾದ ವೇದವ್ಯಾಸ ಕಾಮತ್, ಬಿಜೆಪಿ ಮುಖಂಡರಾದ ಕಿರಣ್ ರೈ ಬಜಾಲ್, ಎಂ ಆರ್ ಗ್ರೂಪ್ಸ್ ನ ಮಾಲಕರಾದ ಮನ್ಮಿತ್ ರೈ ರವರು ಸಹಕಾರ ನೀಡಿದ್ದು, ಇದೇ ಏ.18 ರಂದು ಮೇರಿಹಿಲ್ ನ ಗೆಳೆಯರ ಬಳಗ ಸ್ಟೇಜ್ ನಲ್ಲಿ ಈ ತುಳು ಆಲ್ಬಮ್ ಸಾಂಗ್ ಬಿಡುಗಡೆಗೊಳ್ಳಲಿದೆ.