ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಆಶ್ರಯದಲ್ಲಿ, ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವಿಟ್ಲಪಡ್ನೂರು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವಿಟ್ಲ ಪಡ್ನೂರು, ಕೊಡಂಗಾಯಿ, ಶಿಲ್ಪಶ್ರೀ ಯುವಕ ಮಂಡಲ (ರಿ) ಕೊಡಂಗಾಯಿ. ಹಾಗೂ ಜಿಲ್ಲಾ ಆಸ್ಪತ್ರೆ ಮಂಗಳೂರು, ಇವರ ಸಹಯೋಗದೊಂದಿಗೆ , ಕೆಎಂಸಿ ಹಾಸ್ಪಿಟಲ್ ನ ಪ್ರಸಿದ್ಧ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ, ಹಾಗೂ ಕನ್ನಡಕ ವಿತರಣಾ ಸಮಾರಂಭವು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಬಿ ಸಂದೇಶ ಶೆಟ್ಟಿ ನೇತೃತ್ವದಲ್ಲಿ ವಿಟ್ಲಪಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ, ರೇಷ್ಮಾ ಶಂಕರಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಡಾ.ಗೌರಿ ಪೈ, ಡಾ.ಅನಿಲ್, ಡಾ. ಶಾಂತರಾಜ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಿಂದ ಕುಸುಮ, ವಿ ಎಸ್ ಎಸ್ ಎನ್ ಬ್ಯಾಂಕ್ ಕೊಡಂಗಾಯಿ, ಇದರ ಕಾರ್ಯನಿರ್ವಹಣಾ ಅಧಿಕಾರಿ, ಲಕ್ಷ್ಮೀಶ ರೈ , ಹಾಗೂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಶಿಲ್ಪಶ್ರೀ ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿ ರಘುನಾಥ ಶೆಟ್ಟಿ ಹಾಗೂ ಅಧ್ಯಕ್ಷ ರೋಹಿತ್ ರೈ , ಶಿಲ್ಪಶ್ರೀ ಯುವಕ ಮಂಡಲದ ಮಾಜಿ ಅಧ್ಯಕ್ಷ ಶ ಅರವಿಂದ ರೈ , ಕಾರ್ಯದರ್ಶಿ ಜಯರಾಮ ಗೌಡ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಯ ಸದಸ್ಯರಾದ ಹರೀಶ್ ಶೆಟ್ಟಿ ಡಿ, ಧರ್ಣಪ್ಪಗೌಡ ಬನ, ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಲಯನ್ಸ ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೃಷ್ಟಿ ದೋಷವಿರುವ 122 ಜನರಿಗೆ ಕನ್ನಡಕವನ್ನು ವಿತರಿಸಲಾಯಿತು.