ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ಕಳೆದ ನಾಲ್ಕು ದಿನಗಳಲ್ಲಿ ಮೂರು ಬಾರಿ, ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ, ಅದು ಭಾರತ ಸರ್ಕಾರದ ನಿಯಂತ್ರಣವನ್ನು ಮೀರಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಭಾರತದಲ್ಲಿ, ಶೇಕಡಾ 80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ, ತೈಲ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೂ ಬೀರಿದೆ ಹೀಗಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ತೈಲ ಬೆಲೆಗಳ ಏರಿಕೆ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಸರ್ಕಾರವು ಯೋಚಿಸುತ್ತಿದೆ.ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಸರ್ಕಾರ 2004 ರಿಂದ ಅಡಿಪಾಯ ಸಿದ್ದಪಡಿಸುತ್ತಿದೆ . ಇದಲ್ಲದೆ ನಮಗೆ ಬೇಕಾಗಿರುವ ಇಂಧನವನ್ನು ನಾವು ಸ್ವಂತ ತಯಾರಿಸಬೇಕಾಗಿದೆ ಎಂದು ಸ್ಥಳೀಯ ಇಂಧನ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಭಾರತವು ಶೀಘ್ರದಲ್ಲೇ 40,000 ಕೋಟಿ ಎಥೆನಾಲ್, ಮೆಥೆನಾಲ್ ಮತ್ತು ಜೈವಿಕ ಎಥೆನಾಲ್ ಉತ್ಪಾದನಾ ಆರ್ಥಿಕತೆಯನ್ನು ಹೊಂದಲಿದ್ದು, ಪೆಟ್ರೋಲಿಯಂ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.


























