ನವದೆಹಲಿ: ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಒಟ್ಟು 800 ಅತ್ಯಗತ್ಯ ಔಷಧಿಗಳ ಬೆಲೆ ಏಪ್ರಿಲ್ 1ರಿಂದ ಹೆಚ್ಚಾಗಲಿದೆ.
ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಗತ್ಯ ಔಷಧಿಗಳ ಬೆಲೆಯನ್ನು ಏಪ್ರಿಲ್ ತಿಂಗಳಿಂದ ಹೆಚ್ಚಿಸಲಿದೆ.
ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯ (ಎನ್‌ಎಲ್‌ಇಎಂ) ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ 10.7ರಷ್ಟು ಹೆಚ್ಚಳವನ್ನು ಘೋಷಿಸಿರುವುದರಿಂದ ಗ್ರಾಹಕರು ಏಪ್ರಿಲ್ನಿಂದ ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.