ಬೆಂಗಳೂರು: ಜಿಮ್ನಲ್ಲಿ ವ್ಯಾಯಾಮ ಮಾಡುತ್ತಾ ದಿಢೀರ್ ಕುಸಿದು ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲೇಶ್ ಪಾಳ್ಯ ಜಿಮ್ನಲ್ಲಿ ವೈಟ್ ಎತ್ತಲು ಹೋಗಿ ಮಹಿಳೆ ಕುಸಿದು ಬಿದಿದ್ದರು. ಇನ್ನು ಸಿಸಿಟಿವಿಯಲ್ಲಿ ಯುವತಿ ಬಿದ್ದ ದೃಶ್ಯ ಸೆರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಹೋಗುವಾಗ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ವಿನಯ ಕುಮಾರಿ ವಿಠ್ಠಲ್ (44) ಮೃತ ಮಹಿಳೆ.
ವಿನಯ ಕುಮಾರಿ ಖಾಸಗಿ ಕಂಪನಿ ಉದ್ಯೋಗಿ, ಮೂಲತಃ ಮಂಗಳೂರಿನವರಾಗಿದ್ದು, ಜಿಮ್ ಮತ್ತು ಡ್ಯಾನ್ಸ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.