ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಣಿಯೂರು ಸಮೀಪ ಮಾ. 27 ರಂದು ನಡೆದಿದೆ.
ಮೃತರನ್ನು ಕಾಯ್ಮಣ ಗ್ರಾಮದ ಮಜಲಡ್ಡ ನಿವಾಸಿ ಗಂಗಾಧರ (40) ಎನ್ನಲಾಗಿದೆ.
ಗಂಗಾಧರ ರವರು ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಪುತ್ತೂರು ಆಸ್ಪತ್ರೆಗೆ ತರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ತಾಯಿ ಲಲಿತಾ, ಸಹೋದರ ದಯಾನಂದ, ಸಹೋದರಿ ಮಮತಾ ಅವರನ್ನು ಅಗಲಿದ್ದಾರೆ. ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.