ಕಾರ್ಕಳ: ಮಾರಕಾಸ್ತ್ರಗಳನ್ನು ತೋರಿಸಿ ಐಷಾರಾಮಿ ಕಾರುಗಳನ್ನು ಬಳಸಿ ದನ ಕಳ್ಳತನ ಮಾಡಿದ ಘಟನೆ ಇಂದು ಬೆಳಗ್ಗಿನ ಜಾವ ಕಾರ್ಕಳ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿ ನಡೆದಿದೆ.
ಕಾರ್ಕಳದಲ್ಲಿ ಮತ್ತೆ ಗೋ ಕಳ್ಳತನ ವರದಿಯಾಗಿದೆ. ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ.
ಎರಡು ದಿನಗಳ ಹಿಂದೆ ಹಾಡಹಗಲೇ ನಕಲಿ ನಂಬರ್ ಪ್ಲೇಟ್ ಬಳಸಿ ಓಮ್ನಿ ಕಾರಿನಲ್ಲಿ ಕೊಂಡೊಯ್ಯಲಾಗುತ್ತಿದ್ದ ಗೋ ಕಳ್ಳತನ ಕೃತ್ಯವನ್ನು ಹಿಂದೂ ಜಾಗರಣ ಕಾರ್ಯಕರ್ತರು ಪತ್ತೆ ಹಚ್ಚಿದ್ದು, ಕೂದಲೆಳೆಯ ಅಂತರದಲ್ಲಿ ದನಕಳ್ಳರ ವಾಹನ ಎಸ್ಕೇಪ್ ಆಗಿತ್ತು.
ಇದೀಗ ಮತ್ತೆ ಇಂತದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.