ಪುತ್ತೂರು: “ಡ್ರೀಮ್ ಕ್ಯಾಚರ್ಸ್” ಮಾತೃಶ್ರೀ ಕ್ರಿಯೇಷನ್ ರವರ ಹಾಗೂ ಅಶ್ವಥ್ ಎನ್ ಪುತ್ತೂರು ರವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಹಾಗೂ ನವೀನ್ ರೈ ರವರ ನಿರ್ಮಾಣದ, ಚಲನಚಿತ್ರದ ನಟ ಆರ್ಯನ್ ರವರ ಸಹಕಾರದಲ್ಲಿ ಮೂಡಿ ಬರಲಿರುವ ಜೀವನದಲ್ಲೊಂದು “ಅವಾಂತರ” ಹೊಸಕನ್ನಡ ಕಿರುಚಿತ್ರದ ಮುಹೂರ್ತ ಯುಗಾದಿ ಹಬ್ಬದ ದಿನದಂದು ಮೊಟ್ಟೆತ್ತಡ್ಕ ಮಜಾಲುಮಾರು ಕೊರಗಜ್ಜ ಸನ್ನಿಧಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತುಳುನಾಡ ಹಾಸ್ಯ ಕಲಾವಿದರಾದ ರವಿರಾಮಕುಂಜ. ರಂಗಭೂಮಿ ಕಲಾವಿದರಾದಂತಹ ಜ್ಯೋತಿ ಕುಲಾಲ್, ತುಳು ಚಲನಚಿತ್ರದ ನಟ ಸುದೇಶ್ ರೈ. ಸಂಪ್ಯ ಅಕ್ಷಯ ಕಾಲೇಜ್ ನ ಆಡಳಿತ ಅಧಿಕಾರಿ ಅರ್ಪಿತ್ ಶಂಕರ್, ಬಾಲನಟಿ ವೈಷ್ಣವಿ ಉಜಿರೆ, ಕನ್ನಡ ಹಾಗೂ ತುಳು ಚಲನಚಿತ್ರದಲ್ಲಿ ನಟಿಸಿರುವ ನಟಿ ನವ್ಯ , ಬಾಲ ನಟಿ ತ್ರೀಶಾ ಕಿನ್ನಿಕೋಲಿ, ಅನಿಲ್ ಕುಮಾರ್ ಶೆಟ್ಟಿ, ದೇರ್ಲಾ ಅಣ್ಣಪ್ಪ ಪುತ್ತೂರು, ಪೂರ್ಣಿಮಾ ಉಜಿರೆ, ಅಭಿಷೇಕ್ ಪುತ್ತೂರು ಮುಂತಾದವರು ಉಪಸ್ಥಿತಿಯಲ್ಲಿದ್ದರು.